ಯಾತ್ರಿಕರಿಗೆ ನಿರ್ದೇಶಗಳು

ಮಾಡಬಹುದಾದುದು

ಮಲೆ ಏರುವ ಸಮಯದಲ್ಲಿ ಪ್ರತಿ 10 ಮಿನಿಟು ನಡೆದು 5 ಮಿನಿಟು ವಿಶ್ರಾಂತಿ ಪಡೆಯಿರಿ.

ಸನ್ನಿಧಾನಕ್ಕೆ ತಲುಪಲು ಪರಂಪರಾಗತ ದಾರಿ – ಮರಕೂಟ್ಟಂ, ಶರಂಕುತ್ತಿ, ನಡಪಂದಲ್ ಮಾರ್ಗವನ್ನು ಉಪಯೋಗಿಸಿರಿ.

ಸಾಲಾಗಿ ಬಂದು ಪದಿನೆಟ್ಟಾಂ ಪಡಿಯನ್ನು ತಲುಪಿರಿ.

ಹಿಂತಿರುಗು ಯಾತ್ರೆಯಲ್ಲಿನಡಪಂದಲ್ ಫ್ಲೈ ಓವರ್ ದಾರಿ ಹಿಡಿಯಿರಿ.

ಮೂತ್ರ ಮತ್ತು ಮಲವಿಸರ್ಜನೆಗೆ ಮೂತ್ರ ದೊಡ್ಡಿಗಳನ್ನು ಮತ್ತು ಪಾಯಿಖಾನೆಗಳನ್ನು ಮಾತ್ರ ಉಪಯೋಗಿಸಿರಿ.

ಜನ ಸಂದಣಿಯನ್ನು ಖಚಿತ ಪಡಿಸಿಕೊಂಡು ಪಂಪದಿಂದ ಯಾತ್ರೆ ಹೊರಡಿರಿ.

ಡೋಲಿಯನ್ನು ಉಪಯೋಗಿಸುವಾಗ ಅದರ ಬಾಡಿಗೆಯನ್ನು ದೇವಸ್ವಂ ಬೋರ್ಡ್ ಕೌಂಟರಿನಲ್ಲಿ ಕೊಟ್ಟು ರಶೀದಿಯನ್ನು ಕೈಯಲ್ಲಿ ಇಟ್ಟು ಕೊಳ್ಳಿ.

ಸೆಕ್ಯೂರಿಟಿ ಪರಿಶೀಲನೆಯನ್ನು ಸೆಕ್ಯೂರಿಟಿ ಕೌಂಟರಿನಲ್ಲಿ ಮಾಡಿಸಿ ಕೊಳ್ಳಿ.

ಯಾವುದೇ ಸಹಾಯ, ಸಹಕಾರಗಳಿಗೆ ಪೋಲೀಸನ್ನು ಸಮೀಪಿಸಿರಿ.

ಯಾವದೇ ಅನುಮಾನಾಸ್ಪದ ವ್ಯಕ್ತಿಗಳನ್ನು ಕಂಡರೆ ಪೋಲೀಸರಿಗೆ ತಿಳಿಸಿರಿ.

ಯಾವುದೇ ವಸ್ತುಗಳನ್ನು ಕೊಂಡುಕೊಳ್ಳುವಾಗ ಲೈಸೆನ್ಸ್ ಅಂಗಡಿಗಳಿಂದ ಮಾತ್ರ ಪಡೆಯಿರಿ.

ಪಂಪ, ಸನ್ನಿಧಾನ ಮತ್ತು ಪಂಪದಿಂದ ಸನ್ನಿಧಾನಕ್ಕಿರುವ ದಾರಿಯನ್ನು ಸ್ವಚ್ಛವಾಗಿರುವಂತೆ ಪ್ರಯತ್ನಿಸಿರಿ.

ವಾಹನಗಳನ್ನು ತಂಗುದಾಣದಲ್ಲಿ ಮಾತ್ರ ನಿಲ್ಲಿಸಿರಿ.

ಮಾಡಬಾರದುದು

ಮೊಬೈಲ್ ಫೋನನ್ನು ಸನ್ನಿಧಾನ ಪರಿಸರದಲ್ಲಿ ಉಪಯೋಗಿಸದಿರಿ.

ಪಂಪ, ಸನ್ನಿಧಾನ ಮತ್ತು ಪಂಪದಿಂದ ಸನ್ನಿದಾನಕ್ಕಿರುವ ದಾರಿಯಲ್ಲಿ ಹೊಗೆ ಬತ್ತಿ ಸೇದಬಾರದು.

ಸಾಲನ್ನು ಅಡ್ಡಹಾಯ ಬೇಡಿ.

ಸಾಲಿನಲ್ಲಿರುವಾಗ ಮುಂದಿನವರನ್ನು ದೂಡುವ ಪ್ರಯತ್ನ ಮಾಡ ಬೇಡಿ.

ಆಯುಧ ಮತ್ತು ಸಿಡಿಮದ್ದುಗಳನ್ನು ಕೊಂಡು ಹೋಗ ಬೇಡಿ.

ಅನಧಿಕೃತ ವ್ಯಾಪಾರಿಗಳನ್ನು ಪ್ರೋತ್ಸಾಹಿಸ ಬೇಡಿ.

ಮೂತ್ರ ದೊಡ್ಡಿಯ ಹೊರಗೆ ಎಲ್ಲಿಯೂ ಮೂತ್ರಿಸಬಾರದು ಹಾಗೆಯೇ ಪಾಯಿಖಾನೆಯ ಹೊರಗೆ ಎಲ್ಲಿಯೂ ಮಲವಿಸರ್ಜನೆ ಮಾಡಬಾರದು.

ಯಾವುದೇ ಸಹಾಯ ಪಡೆದುದಕ್ಕೆ ಅಧಿಕ ಹಣ ಕೊಡಬೇಡಿ.

ಯಾವುದೇ ಸಹಕಾರ ಪಡೆಯಲು ಪೋಲೀಸರನ್ನು ಸಮೀಪಿಸಲು ಹಿಂಜರಿಯ ಬೇಡಿ.

ಯಾವುದೇ ನಿರುಪಯೋಗ ವಸ್ತುಗಳನ್ನು ವೇಸ್ಟ್ ಬಿನ್ ಗಳಲ್ಲಲ್ಲದೆ ಮತ್ತೆಲ್ಲೂ ಎಸೆಯಬಾರದು.

ಪದಿನೆಟ್ಟಾಂಪಡಿಯಲ್ಲಿ ತೆಂಗಿನ ಕಾಯಿ ಒಡೆಯಬೇಡಿ.

‘ಪದಿನೆಟ್ಟಾಂಪಡಿ ‘ಯ ಕೆಳಗೆ ಇಬ್ಬದಿಗಳಲ್ಲಿ ಅಲ್ಲದೆ ಮತ್ತೆಲ್ಲಿಯೂ ತೆಂಗಿನ ಕಾಯಿ ಒಡೆಯಬಾರದು.

ಪುಣ್ಯಪದಿನೆಟ್ಟಾಂಪಡಿಯನ್ನು ಏರುವಾಗ ಎಲ್ಲಿಯೂ ಮಂಡಿಯೂರಿ ನಮಸ್ಕರಿಸಬಾರದು.

ಹಿಂತಿರುಗು ಯಾತ್ರೆಯಲ್ಲಿ ನಡಪಂದಲ್ ಫ್ಲೈ ಓವರಿನಲ್ಲಿ ಅಲ್ಲದೆ ಮತ್ಯಾವ ದಾರಿಯನ್ನೂ ಹಿಡಿಯಬಾರದು.

ಮೇಲಂಗಳ ಅಥವಾ ತಂತ್ರಿತಿರುನಡದಲ್ಲಿ ಎಲ್ಲಿಯೂ ವಿಶ್ರಮಿಸಬಾರದು.

ನಡಪಂದಲ್ ಮತ್ತು ಕೆಳ ತಿರುಮುಟ್ಟಂಗಳ ದಾರಿಯನ್ನು ವಿರಿ ಹಾಕುವುದಕ್ಕೆ ಉಪಯೋಗಿಸಬೇಡಿ.

ಭದ್ರತೆ

ಸಿಡಿಮದ್ದುಗಳನ್ನು ನಿಷೇಧಿಸಲಾಗಿದೆ.

ಆಯುಧಗಳನ್ನು ಕೊಂಡೊಯ್ಯ ಬಾರದು.

ಅಡುಗೆ ಅನಿಲ, ಸ್ಟೌವ್ ಇತ್ಯಾದಿಗಳನ್ನು ಸನ್ನಿಧಾನದಲ್ಲಿ ಉಪಯೋಗಿಸಬಾರದು.

ಯಾವುದೇ ಅಗತ್ಯಕ್ಕಾಗಿ ಬೆಂಕಿ ಉರಿಸಿ ಉಪಯೋಗ ಮುಗಿದೊಡನೆ ಅದನ್ನು ಆರಿಸ ಬೇಕು.

ಪದಿನೆಟ್ಟಾಂಪಡಿ ಹತ್ತುವ ಮೊದಲು ನಿಮ್ಮ ಮತ್ತು ನಿಮ್ಮ ಒಡವೆ ವಸ್ತುಗಳನ್ನು ತಪಾಸಣೆಗೊಳಪಡಿಸಬೇಕು.

ತಲುಪುವುದು ಹೇಗೆ

ಶಬರಿಮಲೆಗೆ ಬರುವ ಯಾತ್ರಾರ್ಥಿಗಳ ಸೌಕರ್ಯಕ್ಕಾಗಿ ಪಂಪದಿಂದ ಕೊಯಂಬತ್ತೂರು, ಪಳನಿ ಮತ್ತು ತೆಂಕಾಶಿಪಟ್ಟಣಕ್ಕೆ KSRTC ಬಸ್ಸುಗಳ ಸರ್ವಿಸ್ ಪ್ರಾರಂಭಿಸಿದೆ.

ಅಲ್ಲದೆ ತಮಿಳುನಾಡು ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಪಂಪಕ್ಕೆ ಬಸ್ಸುಗಳನ್ನು ಓಡಿಸಲು ಅನುಮತಿಸಿದೆ. ಪಂಪದಿಂದ ನಿಲಕ್ಕಲ್ಲಿಗೆ ಬಸ್ಸು ಸಂಕೋಲೆ ಸರ್ವೀಸ್ ಇದೆ.

ಅತ್ಯಂತ ಹತ್ತಿರದ ರೈಲ್ವೆ ಸ್ಟೇಶನ್ : ಕೋಟ್ಟಯಂ (ಪಂಪಕ್ಕಿರುವ ದೂರ – XX km)
ಚೆಂಗನ್ನೂರು : (ಪಂಪಕ್ಕಿರುವ ದೂರ – XX km)
ಸಾಗಣೆ ಸೌಕರ್ಯ : ಈ ಸ್ಟೇಶನುಗಳಿಗೆ ರೈಲಿನಲ್ಲಿ ಬಂದಿಳಿದು ಅಲ್ಲಿಂದ ಪಂಪಕ್ಕೆ ಬಸ್ಸಿನಲ್ಲಿ.
ಅತಿ ಹತ್ತಿರದ ನಿಲ್ದಾಣಗಳು : ತಿರುವನಂತಪುರಂ, ಕೊಚ್ಚಿ ಮತ್ತು ನೆಡುಂಬಾಶ್ಶೇರಿ.
 • ಮಾರ್ಗ

  ದೂರ/ಅಂತರ

  ಎರುಮೇಲಿಯಿಂದ ಪಂಪ

  45 ಕಿ.ಮೀಟರ್

  ಕೋಟ್ಟಯಂದಿಂದ ಎರುಮೇಲಿ ಕಾಂಞಿರಪಳ್ಳಿಯಾಗಿ

  55 ಕಿ.ಮೀಟರ್

  ಕೋಟ್ಟಯಂದಿಂದ ಎರುಮೇಲಿ ಮಣಿಮಲದ ಮೂಲಕ

  54 ಕಿ.ಮೀಟರ್

  ಕೋಟ್ಟಯಂದಿಂದ ಪಂಪಕ್ಕೆ ಮಣಿಮಲದ ಮೂಲಕ

  116 ಕಿ.ಮೀಟರ್

  ಕೋಟ್ಟಯಂದಿಂದ ಪಂಪಕ್ಕೆ ತಿರುವಲ್ಲದಿಂದಾಗಿ(ಕೋಳಂಚ್ಚೇರಿ, ವಡಶ್ಶೇರಿಕರ)

  119 ಕಿ.ಮೀಟರ್

  ಕೋಟ್ಟಯಂದಿಂದ ಪಂಪಕ್ಕೆ ತಿರುವಲ್ಲದಿಂದಾಗಿ

  123 ಕಿ.ಮೀಟರ್

 • ಮಾರ್ಗ

  ದೂರ/ಅಂತರ

  ಚೆಂಗನ್ನೂರು – ಪಂಪ

  93 ಕಿ.ಮೀಟರ್

  ಎರ್ನಾಕುಳಂದಿಂದ ಪಂಪಕ್ಕೆ ಕೋಟ್ಟಯಂ ದಾರಿಯಾಗಿ

  200 ಕಿ.ಮೀಟರ್

  ಮಲ್ಲಪ್ಪಳ್ಳಿಯಿಂದ ಪಂಪಕ್ಕೆ MC ರೋಡ್ ದಾರಿಯಾಗಿ

  137 ಕಿ.ಮೀಟರ್

  ಪುನಲೂರಿನಿಂದ ಪಂಪಕ್ಕೆ

  101 ಕಿ.ಮೀಟರ್

  ಪತ್ತನಂತಿಟ್ಟದಿಂದ ಪಂಪಕ್ಕೆ

  65 ಕಿ.ಮೀಟರ್

  ತಿರುವನಂತಪುರದಿಂದ ಪಂಪಕ್ಕೆ

  180 ಕಿ.ಮೀಟರ್

  ಎರ್ನಾಕುಳಂದಿಂದ ಎರುಮೇಲಿಗೆ ವೈಕ್ಕಂ, ಪಾಲ, ಪೊನ್ಕುನ್ನಂ ದಾರಿಯಾಗಿ

  121 ಕಿ.ಮೀಟರ್

Road Maps of Kerala